Digital Academy Kannada

ಟೆಸ್ಟ್ ಗೆ ಮುನ್ನ - ಇದನ್ನು ತಿಳಿದಿರಬೇಕು

ದಿನಾಲು ರಾತ್ರಿ 9:30ಕ್ಕೆ ಶುರುವಾಗುವ ಕ್ವಿಜ್‌ನಲ್ಲಿ ನಾವು ನೀವು ಎಲ್ಲರೂ ಭಾಗವಹಿಸುತ್ತಿದ್ದೇವೆ. ಇನ್ನೂ ಭಾಗವಹಿಸದವರು ತಪ್ಪದೇ ಭಾಗವಹಿಸಿ.

ಈ ತರದ ಕ್ವಿಜ್‌ಗಳನ್ನು ಹಲವು ಗ್ರೂಪ್‌ಗಳಲ್ಲಿ ನಡೆಸಲಾಗುತ್ತಿದೆ. ಇದರಲ್ಲಿ ನಮ್ಮ ಗ್ರೂಪ್‌ನಲ್ಲಿ ಹೇಳಿಕೊಳ್ಳುವಂತಹ ವಿಶೇಷತೆ ಇಲ್ಲ ಎಂದು ಹೇಳಬಹುದು. ಆದರೆ ಇದು ತುಂಬಾ ಎಫೆಕ್ಟಿವ್ ಆಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರಿಗೆ ತುಂಬಾ ಉಪಯುಕ್ತವಾಗಿದೆ ಎಂಬುದು ನಮಗೆಲ್ಲರಿಗೂ ಗೊತ್ತಿರುವ ವಿಷಯ.

ಈಗ ನಾವು ಇದರಲ್ಲಿ ಸ್ವಲ್ಪ ಮಟ್ಟಿನ ಬದಲಾವಣೆ ತರಲು ಹೊರಟಿದ್ದೇವೆ.

ನಿಮಗೆಲ್ಲರಿಗೂ ತಿಳಿದಿರುವಂತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ Negative Marking (ಋಣಾತ್ಮಕ ಮೌಲ್ಯಮಾಪನ) ಇರುತ್ತದೆ. ಅದೇ ರೀತಿ ಕ್ವಿಜ್ ನಡೆಸಲು ನಾವು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಿದ್ದೇವೆ. ಆದರೆ ಪ್ರಸ್ತುತ ಆಪ್‌ನಲ್ಲಿ ಅದಕ್ಕೆ ಸೂಕ್ತವಾದ ಫೀಚರ್‌ಗಳು ಲಭ್ಯವಿಲ್ಲ.

ಆದರೂ ನಾವು ನಿಲ್ಲದೆ ಯೋಚನೆ ಮಾಡಿ ಕೊನೆಗೆ ಒಂದು ಪರಿಹಾರ ಕಂಡುಕೊಂಡಿದ್ದೇವೆ.

DAK-QuizX-100 ,101, 102, 103… ಈ ರೀತಿಯಾಗಿ ಕ್ವಿಜ್‌ಗಳನ್ನು ಮುಂದುವರಿಸುತ್ತೇವೆ.

ಈ ಕ್ವಿಜ್ Negative Marking ಆಧಾರಿತವಾಗಿದ್ದು, ಒಟ್ಟು 100(ಕಡಿಮೆ ಅಥವಾ ಹೆಚ್ಚು ಮೊದಲು ಹೇಳಲಾಗುತ್ತದೆ) ಅಂಕಗಳನ್ನು ಹೊಂದಿರುತ್ತದೆ.
ಈ ಟೆಸ್ಟ್ ವೆಬ್‌ಸೈಟ್‌ನಲ್ಲಿ ನಡೆಸಲಾಗುತ್ತದೆ.

ಕ್ವಿಜ್ ಮುಗಿದ ನಂತರ ನಿಮ್ಮ ಫಲಿತಾಂಶ ಬರುತ್ತದೆ. ಅದನ್ನು Digital Academy Kannada ಗ್ರೂಪ್‌ಗೆ ಫಾರ್ವರ್ಡ್ ಮಾಡಬೇಕು. ಅಲ್ಲಿ ನಿಮ್ಮ ಸ್ಕೋರ್ ಅನ್ನು ಇತರರು ನೋಡಬಹುದು ಮತ್ತು ನೀವು ಇತರರ ಸ್ಕೋರ್‌ಗಳನ್ನು ನೋಡಬಹುದು. ಇದರಿಂದ ಸ್ಪರ್ಧಾತ್ಮಕತೆ ಹೆಚ್ಚಾಗಿ ಇನ್ನಷ್ಟು ಉತ್ಸಾಹ ಬರುತ್ತದೆ.

ಇದು ಮುಂದಿನ ನಿಜವಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಸಹಾಯ ಮಾಡುತ್ತದೆ.

ನೀವು ಗ್ರೂಪ್‌ನಲ್ಲಿ ಸಾಮಾನ್ಯವಾಗಿ ಡೌಟ್ಗಳನ್ನು ಕೇಳಬಹುದು, ನಡೆಯುವ ಚರ್ಚೆಗಳಲ್ಲಿ ಭಾಗವಹಿಸಬಹುದು ಮತ್ತು ಇತರ ಮಾಹಿತಿಗಳನ್ನು ಪಡೆದುಕೊಳ್ಳಬಹುದು.

ನಾವು ಕೂಡ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವುದರಿಂದ ನಮಗೂ ತುಂಬಾ ಉತ್ಸಾಹ ಇದೆ. ಎಲ್ಲರೂ ಇದರ ಸದ್ಉಪಯೋಗ ಪಡೆದುಕೊಳ್ಳಬೇಕು.

ಪ್ರಶ್ನೆಗಳು ಆನ್‌ಲೈನ್‌ನಲ್ಲಿ ಲಭ್ಯವಿರುವ ವಿವಿಧ ವೆಬ್‌ಸೈಟ್‌ಗಳು ಮತ್ತು ಸ್ಟಡಿ ಮೆಟೀರಿಯಲ್‌ಗಳಿಂದ ಸಂಗ್ರಹಿಸಲಾಗುತ್ತದೆ.

ಮುಂದೆ Subscription ವ್ಯವಸ್ಥೆ ತಂದರೂ ಕೂಡ ದಯವಿಟ್ಟು ಸಪೋರ್ಟ್ ಮಾಡಬೇಕೆಂದು ವಿನಂತಿ.


ವಿಶೇಷ ಮಾಹಿತಿ – Quiz Code ಉಪಯೋಗ:

DAK-QuizX-100, 101, 102 … ಈ ಕ್ವಿಜ್‌ನಲ್ಲಿ Rank System ನಿಮ್ಮ score ಆಧಾರವಾಗಿ ನಿರ್ಧರಿಸಲಾಗುತ್ತದೆ. ಯಾರು ಹೆಚ್ಚು ಅಂಕ ಪಡೆಯುತ್ತಾರೋ ಅವರು ಮೇಲಿನ rank ಪಡೆಯುತ್ತಾರೆ. ಎಲ್ಲಾ ಬಳಕೆದಾರರ ಅಂಕಗಳನ್ನು ಹೋಲಿಸಿ Top 3 rank ಅನ್ನು ಆಯ್ಕೆ ಮಾಡಲಾಗುತ್ತದೆ ಮತ್ತು ಅದನ್ನು group ನಲ್ಲಿ share ಮಾಡಲಾಗುತ್ತದೆ. ಒಂದೇ ಅಂಕ ಬಂದರೆ ಮೊದಲಿಗೆ attempt ಮಾಡಿದವರಿಗೆ ಹೆಚ್ಚು priority ಸಿಗುತ್ತದೆ. ಪ್ರತಿ ಕ್ವಿಜ್‌ಗೆ rank ಪ್ರತ್ಯೇಕವಾಗಿರುತ್ತದೆ, ಒಂದು ಕ್ವಿಜ್‌ನ rank ಮತ್ತೊಂದು ಕ್ವಿಜ್‌ಗೆ ಸಂಬಂಧ ಇರುವುದಿಲ್ಲ

Want to join the discussion? Contact Admin

👉 @Anjaneyaanwar

ಎಲ್ಲ ಓದಿದ ನಂತರ ನಿಮ್ಮ ಅನಿಸಿಕೆ ವ್ಯಕ್ತಪಡಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:

Digital Academy Kannada Telegram Group